ಸಿಎಂ ಯಡಿಯೂರಪ್ಪರಿಂದ ರಕ್ಷಣಾ ಸಚಿವರಿಗೆ ಪತ್ರ

 THE NEWS INDIA 24/7  KANNADA NATIONAL NEWS NETWORK….ಬೆಂಗಳೂರು, ಮಾರ್ಚ್ 7: “13 ನೇ ವೈಮಾನಿಕ ಪ್ರದರ್ಶವನ್ನು ಬೆಂಗಳೂರಿನಲ್ಲೇ ಆಯೋಜಿಸಬೇಕು” ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಕ್ಷಾಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, “ವೈಮಾನಿಕ ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸಬಾರದು” ಎಂದು ಮನವಿ ಮಾಡಿದ್ದಾರೆ.

“ಬೆಂಗಳೂರಿನಲ್ಲೇ 13 ನೇ ವೈಮಾನಿಕ ಪ್ರದರ್ಶನವನ್ನು ನಡೆಸಲು ವಾಯಸೇನಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುತ್ತೀರಿ ಎಂದು ನಾನು ನಂಬಿದ್ದೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಕಳೆದ ವರ್ಷದ 12ನೇ ವೈಮಾನಿಕ ಪ್ರದರ್ಶನದ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ನೂರಾರು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ಅಲ್ಲದೇ ಮುಗಿಲೆತ್ತರದ ಹೊಗೆ ಪಸರಿಸಿ ವೈಮಾನಿಕ ಪ್ರದರ್ಶನಕ್ಕೆ ಆತಂಕ ತಂದೊಡ್ಡಿತ್ತು. ಇದರಿಂದ ರಕ್ಷಣಾ ಇಲಾಖೆ ಬೆಂಗಳೂರಿನಿಂದ ವೈಮಾನಿಕ ಪ್ರದರ್ಶನವನ್ನು ಬೇರೆಡೆಗೆ ವರ್ಗಾಯಿಸಲು ಚಿಂತಿಸಿದೆ ಎನ್ನಲಾಗಿದೆ.

Related posts

Leave a Comment