ಬೆಂಗಳೂರಿನ ವಿವಿಧೆಡೆ ರಾತ್ರೋರಾತ್ರಿ ಆದಾಯ ತೆರಿಗೆ ದಾಳಿ!

THE NEWS INDIA 24/7 KANNADA NEWS NETWORK…ಬೆಂಗಳೂರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬುಧವಾರ ಮಾತನಾಡುತ್ತಾ, ಗುರುವಾರದಂದು ರಾಜ್ಯದ ವಿವಿಧೆಡೆ ಆದಾಯ ತೆರಿಗೆ ದಾಳಿ ನಡೆಸಲು ಸಿದ್ಧತೆ ನಡೆದಿದೆ ಎಂದು ಹೇಳಿದ್ದರು. ಆದರೆ ಬುಧವಾರ ರಾತ್ರಿಯೇ ಜಯನಗರ, ಬಸಸವನಗುಡಿ ಸೇರಿದಂತೆ ವಿವಿಧೆದೆ ಆದಾಯ ತೆರಿಗೆ ದಾಳಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿ ಅಗಿದೆ.

ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಇರುವ ಉದ್ಯಮಿ ಸಿದ್ದಿಕ್ ಶೇಟ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದ್ದು, ದಾಖಲಾತಿಗಳ ಪರಿಶೀಲನೆಗಳು ನಡೆಯುತ್ತಿದೆ ಎಂದು ತಕ್ಷಣದ ಮಾಹಿತಿ ದೊರೆತಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡುತ್ತಿದ್ದು, ಈ ಸುದ್ದಿಯ ನಿಖರತೆ ಬಗ್ಗೆ ಕೂಡ ಖಾತ್ರಿ ಆಗಬೇಕಿದೆ.

ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ, ಒಂದು ವೇಳೆ ಆದಾಯ ತೆರಿಗೆ ದಾಳಿ ಮಾಡಿದರೆ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅವರು ನಡೆದುಕೊಂಡ ರೀತಿಯಲ್ಲೇ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದರು. ಆದಾಯ ತೆರಿಗೆ ದಾಳಿ ಬಗ್ಗೆ ಬಿಜೆಪಿಯವರಿಂದಲೇ ನನಗೆ ಮಾಹಿತಿ ಬಂದಿದೆ. ಐಟಿ ಅಧಿಕಾರಿ ಬಾಲಕೃಷ್ಣನ್ ಅವರು ಬಿಜೆಪಿ ಏಜೆಂಟ್ ರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

Related posts

Leave a Comment