ಭಾರತದ ಮೇಲೆ 50 ಅಣುಬಾಂಬ್ ಹಾಕಲು ನಮಗೆ ಸಾಧ್ಯವೇ? ಮುಷ್ರಫ್ ಪ್ರಶ್ನೆ!

THE NEWS INDIA NATIONAL 24/7 KANNADA NEWS NETWORK…..ಅಬುದಾಬಿ, ಫೆಬ್ರವರಿ 25: “ನಾವು ಭಾರತದ ಮೇಲೆ ಒಂದು ಅಣುಬಾಂಬ್ ಹಾಕಿದೆ, ಅದು ನಮ್ಮ ಮೇಲೆ 20 ಅಣುಬಾಂಬ್ ಹಾಕಿ ಮುಗಿಸಿಬಿಡಬಲ್ಲದು. ಆದ್ದರಿಂದ ನಾವು ಭಾರತದ ಮೇಲೆ 50 ಅಣು ಬಾಂಬ್ ಹಾಕಿದರೆ, ಅದು ದಾಳಿ ಮಾಡಲು ಸಾಧ್ಯವಿಲ್ಲ. ಅಷ್ಟು ಅಣುಬಾಂಬ್ ಹಾಕಲು ನಿಮ್ಮಿಂದ ಸಾಧ್ಯವೇ?” ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಕೇಳಿದ್ದಾರೆ.

ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಮುಷ್ರಫ್, ‘ಪಾಕಿಸ್ತಾನ ಮತ್ತು ಭಾರತದ ಸಂಬಂಧ ಅಪಾಯಕಾರಿ ಮಟ್ಟ ತಲುಪಿದೆ ಎಂದರು. ಇಲ್ಲಿ ಅಣುದಾಳಿಯಾಗುವುದಿಲ್ಲ. ಏಕೆಂದರೆ ನಾವು ಒಂದು ಅಣುಬಾಂಬ್ ಹಾಕಿದರೆ, ಭಾರತ 20 ಅಣುಬಾಂಬ್ ಹಾಕಿ ನಮ್ಮನ್ನು ನಾಶ ಮಾಡಿಬಿಡುತ್ತದೆ’ ಎಂದು ಮುಷ್ರಫ್ ಹೇಳಿದ್ದಾರೆ.

ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ನಡೆದ ಆತ್ಮಾಹುತಿ ಕಾರ್ ಬಾಬ್ ದಾಳಿಯಲ್ಲಿ ಭಾರತದ 44 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯದ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಈ ಕುರಿತು ವಿಶ್ವದಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಭಾರತ-ಪಾಕಿಸ್ತಾನದ ನಡುವೆ ಯುದ್ಧದಂಥ ಸನ್ನಿವೇಶ ಏರ್ಪಟ್ಟಿದೆ.

Related posts

Leave a Comment