ಯಾವಾಗ ಬೇಕಾದ್ರು ಸಾಯ್ಬೋದು ಅಂದಿದ್ದ ಎಚ್‌ಡಿಕೆ 85 ವರ್ಷ ಬದುಕಿರ್ತಾರಂತೆ

THE NEWS INDIA(TNI 24 NEWS NETWORK)..… ಅಕ್ಟೋಬರ್ 27: ನಿನ್ನೆಯಷ್ಟೆ, ‘ನಾನು ಯಾವಾಗ ಬೇಕಾದ್ರು ಸಾಯಬಹುದು’ ಎಂದಿದ್ದ ಸಿಎಂ ಕುಮಾರಸ್ವಾಮಿ ಇಂದು ವರಸೆ ಬದಲಿಸಿದ್ದಾರೆ. ಇಂದು ಮಂಡ್ಯದ ಪಾಂಡವಪುರದಲ್ಲಿ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ‘ನಾನೇನು ನಾಳೆ ಬೆಳಿಗ್ಗೆಯೇ ಸಾಯುವುದಿಲ್ಲ, 85 ವರ್ಷ ಆಗುವವರೆಗೆ ನಾನು ಬದುಕಿರುತ್ತೇನೆ’ ಎಂದು ಹೇಳಿದರು. ನಿನ್ನೆ ಸಿಎಂ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗೆ ಗುರಿ ಆಗಿತ್ತು. ಆದ ಕಾರಣ ಸಿಎಂ ಅವರು ಇಂದು ತಮ್ಮ ಹೇಳಿಕೆ ಬದಲಿಸಿದ್ದಾರೆ ಎನ್ನಲಾಗಿದೆ. ನನ್ನ ಕಣ್ಣೀರು ನಾಟಕೀಯವಲ್ಲ, ನಾನೊಬ್ಬ ಭಾವನಾತ್ಮಕ ಜೀವಿ : ಕುಮಾರಸ್ವಾಮಿ ನಿನ್ನೆ ಮಳವಳ್ಳಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ‘ಇಸ್ರೇಲ್‌ನಲ್ಲೇ ನಾನು ಸಾಯಬೇಕಿತ್ತು, ನನ್ನ ಆರೋಗ್ಯ ಸರಿ ಇಲ್ಲ ನಾನು ಯಾವಾಗ ಬೇಕಾದರೂ ಸಾಯಬಹುದು’ ಎಂದು ಭಾವನಾತ್ಮಕವಾಗಿ ಹೇಳಿದ್ದರು.

‘ಕಣ್ಣೀರು ನಾಟಕವಲ್ಲ ನಾನು ಭಾವುಕ ಜೀವಿ’

ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ ಇದೇ ವಿಷಯ ಮಾತನಾಡಿ, ‘ ನಿನ್ನೆಯ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ನಾಟಿಕೀಯವಲ್ಲ, ನಾನು ಸ್ವಭಾವತಃ ಭಾವಜೀವಿ’ ಎಂದು ಸಮಜಾಯಿಷಿ ನೀಡಿದ್ದರು.

ಕುಮಾರಸ್ವಾಮಿ ಅವರು ಸಾಯುವ ಮಾತನ್ನು ಚುನಾವಣೆಗೆ ಮುಂಚೆ ಸಹ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಮಾತನಾಡಿದಾಗಲೆಲ್ಲಾ ಟ್ರೋಲ್‌ಗೆ ಗುರಿ ಆಗುತ್ತಿರುವುದು ಸಾಮಾನ್ಯವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಕುಮಾರಸ್ವಾಮಿ ಸಾಯುವ ಮಾತನ್ನಾಡುತ್ತಾರೆ ಎಂದು ಟ್ರೋಲ್‌ಗಳು ವ್ಯಂಗ್ಯ ಮಾಡಿವೆ.

Related posts

Leave a Comment