ಮತದಾರರ ನಂಬಿಕೆ ಕಳೆದುಕೊಂಡಿದ್ದಾರೆ ಮೋದಿ: ಮನಮೋಹನ್ ಸಿಂಗ್

THE NEWS INDIA(TNI 24 NEWS NETWORK)…ಅಕ್ಟೋಬರ್ 27: “ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಮತ ಹಾಕಿದ ಜನರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ” ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ಶುಕ್ರವಾರ ಹೇಳಿದರು. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ‘The Paradoxical Prime Minister: Narendra Modi and His India’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. “ಪ್ರಧಾನಿ ಮೋದಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಕೋಮು ಗಲಭೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಮಾತ್ರ ಮೌನ ಮುರಿಯುವುದಿಲ್ಲ” ಸಿಂಗ್ ದೂರಿದರು.

ದೇಶದಲ್ಲಿ ಅರಾಜಕತೆ ತಲೆದೋರಿದೆ. ಸಿಬಿಐ ನಂಥ ಸಂಸ್ಥೆಗಳ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಗ್ಗೆಯೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಅಪನಗದೀಕರಣ ಮತ್ತು ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಗಳು ಅರ್ಥವ್ಯವಸ್ಥೆಯ ದುರಂತ ಎಂದರು.ಸಾಧಿಸಿಲ್ಲ’ ಎಂದು ಸಿಂಗ್ ಹೇಳಿದರು.

MANCHALA BHASKERA REDDY.,

POLITICAL NEWS DESAK HEAD.

Related posts

Leave a Comment