ಮಿಟೂ ಎಲ್ಲಾ ಬಂಡಲ್‌, ಚಿತ್ರರಂಗದಲ್ಲಿ ‘ಅದು’ ಮಾಮೂಲಿ ಎಂದಳು ನಟಿ

THE NEWS INDIA(TNI 24 NEWS NETWORK)…ನವದೆಹಲಿ, ಅಕ್ಟೋಬರ್ 14: #ಮಿಟೂ ಎಲ್ಲಾ ಸುಮ್ಮನೆ ಬಂಡಲ್‌ ಅಷ್ಟೆ ‘ಚಿತ್ರರಂಗದಲ್ಲಿ ಹೀಗೆ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಮಾಮೂಲಿ’ ಎಂದು ಮಾಜಿ ಬಿಗ್‌ಬಾಸ್ ವಿಜೇತೆ ಹಾಗೂ ಟಿವಿ ನಟಿ ಶಿಲ್ಪಾ ಶಿಂಧೆ ಹೇಳಿದ್ದಾರೆ. #ಮಿಟೂ ಅಭಿಯಾನ ಬಾಲಿವುಡ್‌ನ ಭಾರಿ ಕುಳಗಳನ್ನೇ ಖೆಡ್ಡಾಕ್ಕೆ ಕೆಡವಿ ಭಾರಿ ಚಂಡಮಾರುತ ಸೃಷ್ಠಿಸುತ್ತಿರುವ ಸಮಯದಲ್ಲೇ ಶಿಂಧೆ ಅವರು ಈ ಹೇಳಿಕೆ ನೀಡಿರುವುದು ಆಶ್ಚರ್ಯ.ಮಿಟೂ ಅಭಿಯಾನದಡಿ ನಟಿಯರು ತಮಗೆ ದೊಡ್ಡ ನಟರು, ಸಿನಿಮಾ ಮಂದಿ ನೀಡಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದರೆ ಶಿಂಧೆ ಅವರು ಇದಕ್ಕೆ ಬೇರೆಯದೇ ಆಯಾಮ ಒದಗಿಸಿದ್ದಾರೆ.

‘ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!’ ಆರೋಪ ಮಾಡಿರುವವರು ಬೇಕೆಂದೇ ತಮ್ಮ ವೈಯಕ್ತಿಕ ಲಾಭಕ್ಕೆ ಪರಸ್ಪರ ಸಹಕಾರದೊಂದಿಗೆ ಲೈಂಗಿಕತೆಗೆ ಸಹಕರಿಸಿದ್ದಾರೆ’ ಎಂಬರ್ಥದ ಮಾತುಗಳನ್ನು ಶಿಂಧೆ ಆಡಿದ್ದಾರೆ. #ಮಿಟೂ : ವಿನ್ತಾ ನಂದಾ ವಿರುದ್ಧ ಅಲೋಕ್ ನಾಥ್ ಮಾನನಷ್ಟ ಮೊಕದ್ದಮೆ #ಮಿಟೂ ಅಭಿಯಾನವನ್ನು ಕಳಪೆ ಎಂದು ಕರೆದಿರುವ ಶಿಂಧೆ ಅವರು, ಯಾವಾಗ ಘಟನೆ ನಡೆದಿರುತ್ತದೆಯೋ ಆಗಲೇ ದೂರು ನೀಡಬೇಕು ಈಗ ಮಾಡುದರ ಅರ್ಥವೇನು ಎಂದು, #ಮಿಟೂ ಅಭಿಯಾನದಡಿ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿರುವವರ ಸಾಚಾತನವನ್ನೇ ಪ್ರಶ್ನಿಸಿದ್ದಾರೆ. ಹೈಪ್ರೊಫೈಲ್ ಕಾಮುಕರಿಗೆ ಹೆಡೆಮುರಿಕಟ್ಟಲು ಸಜ್ಜಾಗಿದೆ ಸಮಿತಿ ಚಿತ್ರರಂಗ ಕೆಟ್ಟದ್ದಲ್ಲ ಹಾಗೆಂದು ಪೂರ್ಣ ಒಳ್ಳೆಯದು ಎಂದು ಹೇಳಲಾರೆ. ಇಲ್ಲಿ ಅತ್ಯಾಚಾರಗಳಂತಹಾ ಘಟನೆಗಳು ನಡೆದಿವೆ ಎಂದು ನಾನು ಒಪ್ಪುವುದಿಲ್ಲ. ಪರಸ್ಪರ ಒಪ್ಪಿಗೆಯ ಮೇಲೆಯೇ ಅವೆಲ್ಲಾ ನಡೆದಿರುತ್ತವೆ ಆದರೆ ಈಗ ಆಗಿನ ಘಟನೆಗಳ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Related posts

Leave a Comment