ಬೆಂಗಳೂರಿನ ವಿವಿಧೆಡೆ ರಾತ್ರೋರಾತ್ರಿ ಆದಾಯ ತೆರಿಗೆ ದಾಳಿ!

THE NEWS INDIA 24/7 KANNADA NEWS NETWORK…ಬೆಂಗಳೂರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬುಧವಾರ ಮಾತನಾಡುತ್ತಾ, ಗುರುವಾರದಂದು ರಾಜ್ಯದ ವಿವಿಧೆಡೆ ಆದಾಯ ತೆರಿಗೆ ದಾಳಿ ನಡೆಸಲು ಸಿದ್ಧತೆ ನಡೆದಿದೆ ಎಂದು ಹೇಳಿದ್ದರು. ಆದರೆ ಬುಧವಾರ ರಾತ್ರಿಯೇ ಜಯನಗರ, ಬಸಸವನಗುಡಿ ಸೇರಿದಂತೆ ವಿವಿಧೆದೆ ಆದಾಯ ತೆರಿಗೆ ದಾಳಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿ ಅಗಿದೆ. ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಇರುವ ಉದ್ಯಮಿ ಸಿದ್ದಿಕ್ ಶೇಟ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದ್ದು, ದಾಖಲಾತಿಗಳ ಪರಿಶೀಲನೆಗಳು ನಡೆಯುತ್ತಿದೆ ಎಂದು ತಕ್ಷಣದ ಮಾಹಿತಿ ದೊರೆತಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡುತ್ತಿದ್ದು, ಈ ಸುದ್ದಿಯ ನಿಖರತೆ ಬಗ್ಗೆ ಕೂಡ ಖಾತ್ರಿ ಆಗಬೇಕಿದೆ. ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ, ಒಂದು ವೇಳೆ ಆದಾಯ ತೆರಿಗೆ ದಾಳಿ ಮಾಡಿದರೆ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅವರು ನಡೆದುಕೊಂಡ…

Read More

ಭಾರತದ ಮೇಲೆ 50 ಅಣುಬಾಂಬ್ ಹಾಕಲು ನಮಗೆ ಸಾಧ್ಯವೇ? ಮುಷ್ರಫ್ ಪ್ರಶ್ನೆ!

THE NEWS INDIA NATIONAL 24/7 KANNADA NEWS NETWORK…..ಅಬುದಾಬಿ, ಫೆಬ್ರವರಿ 25: “ನಾವು ಭಾರತದ ಮೇಲೆ ಒಂದು ಅಣುಬಾಂಬ್ ಹಾಕಿದೆ, ಅದು ನಮ್ಮ ಮೇಲೆ 20 ಅಣುಬಾಂಬ್ ಹಾಕಿ ಮುಗಿಸಿಬಿಡಬಲ್ಲದು. ಆದ್ದರಿಂದ ನಾವು ಭಾರತದ ಮೇಲೆ 50 ಅಣು ಬಾಂಬ್ ಹಾಕಿದರೆ, ಅದು ದಾಳಿ ಮಾಡಲು ಸಾಧ್ಯವಿಲ್ಲ. ಅಷ್ಟು ಅಣುಬಾಂಬ್ ಹಾಕಲು ನಿಮ್ಮಿಂದ ಸಾಧ್ಯವೇ?” ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಕೇಳಿದ್ದಾರೆ. ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಮುಷ್ರಫ್, ‘ಪಾಕಿಸ್ತಾನ ಮತ್ತು ಭಾರತದ ಸಂಬಂಧ ಅಪಾಯಕಾರಿ ಮಟ್ಟ ತಲುಪಿದೆ ಎಂದರು. ಇಲ್ಲಿ ಅಣುದಾಳಿಯಾಗುವುದಿಲ್ಲ. ಏಕೆಂದರೆ ನಾವು ಒಂದು ಅಣುಬಾಂಬ್ ಹಾಕಿದರೆ, ಭಾರತ 20 ಅಣುಬಾಂಬ್ ಹಾಕಿ ನಮ್ಮನ್ನು ನಾಶ ಮಾಡಿಬಿಡುತ್ತದೆ’ ಎಂದು ಮುಷ್ರಫ್ ಹೇಳಿದ್ದಾರೆ. ಪುಲ್ವಾಮಾದಲ್ಲಿ ಫೆಬ್ರವರಿ 14…

Read More

ಇಂದೂ ನಡೆಯಲಿದೆ ವಾದ್ರಾ ವಿಚಾರಣೆ, ಕಾಂಗ್ರೆಸ್ ಗೆ ನಡುಕ?

THE NEWS INDIA 24/7 KANNADA NEWS NETWORK…ನವದೆಹಲಿ, ಫೆಬ್ರವರಿ 07: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಉದ್ಯಮಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ಗುರುವಾರವೂ ವಿಚಾರಣೆ ನಡೆಸಲಿದೆ. ಬುಧವಾರ ಸುಮಾರು 5 ಗಂಟೆಗೂ ಹೆಚ್ಚು ಕಾಲ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತವಾಗಿ ವಿಚಾರಣೆಗೊಳಪಡಿಸಿದ್ದರು. ಇಂದು ಬೆಳಿಗ್ಗೆ 110:30 ರಿಂದ ಮತ್ತೆ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಲಂಡನ್ ಮತ್ತು ಇತರೆಡೆ ಅಕ್ರಮವಾಗಿ ಆಸ್ತಿ ಹೊಂದಿರುವ ಆರೋಪ ವಾದ್ರಾ ಅವರ ಮೇಲಿದೆ. 2005-2010 ರ ಅವಧಿಯಲ್ಲಿ ಸುಮಾರು ಐದಕ್ಕೂ ಹೆಚ್ಚು ಮನೆಗಳನ್ನು ವಾದ್ರಾ ಖರೀದಿಸಿದ್ದು, ಅವುಗಳಲ್ಲಿ ಎರಡು ಐಷಾರಾಮಿ ವಿಲ್ಲಾ ಬೆಲೆಯೇ 83 ಕೋಟಿ ರೂ.ನಷ್ಟಾಗುತ್ತದೆ ಎನ್ನಲಾಗಿದೆ. ಈ ಮಧ್ಯೆ, ‘ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮನೆಗಳನ್ನು ಕಿಕ್ ಬ್ಯಾಕ್ ಮೂಲಕ ವಾದ್ರಾ…

Read More

ಅನಂತ್ ಕುಮಾರ್ ಕುಮಾರ್ ಅಗಲಿಕೆಗೆ ಮೋದಿ ಭಾವುಕ ಶ್ರದ್ಧಾಂಜಲಿ

THE NEWS INDIA(TNI 24 NEWS KANNADA NETWORK)…ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನನ್ನ ಸಹೋದ್ಯೋಗಿಯ ಹಠಾತ್ ಅಗಲಿಕೆ ತೀವ್ರ ನೋವನ್ನು ತರಿಸಿದೆ ಎಂದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿಯವರು, ತಮ್ಮ ತರುಣ ವಯಸ್ಸಿನಲ್ಲೇ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅನಂತಕುಮಾರ್, ಸಮಾಜ ಹಾಗೂ ದೇಶ ಸೇವೆಗಾಗಿ ತಮ್ಮನ್ನೇ ಸಮರ್ಪಣೆ ಮಾಡಿಕೊಂಡಿದ್ದರು. ಅವರ ಗಮನಾರ್ಹ ಸೇವೆಗಳಿಂದಾಗಿಯೇ ಅವರ ನೆನಪು ಸದಾ ನಮ್ಮೊಂದಿಗೆ ಇರುತ್ತದೆ ಎಂದಿದ್ದಾರೆ. ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅನಂತ್ ಕುಮಾರ್ ಅವರು ಸೋಮವಾರ ಬೆಳಿಗ್ಗೆ ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಗಲಿಕೆಗೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದು, ಸಾಲು ಸಾಲು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾವುಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ

Read More